ಒಟ್ಟು 23 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪದವಿಯ ರೂಪಿನ ಸೊಬಗಿನ ಮದಮಂ ಮಾಡುವರ ಮೂಗಿನೊಳ್‌ ಪಾತ್ರಮನಾ ಡದೆ ಮಾಣದನಂಗನ ಕೃತಿ ಸುದತಿಯರ ವಿಕಾರಮೆಂಬ ವಿದ್ಯಾಬಲದಿಂ
--------------
ಜನ್ನ
ಪೊಡನಡಲೆತ್ತುವ ಕೈಗಳ್‌ ಪೊಡೆಯಲೈತ್ತುಗುಮೆ ಮೂಜುಲೋಕದ ಕೈಗ- ನ್ನಡಿ ಸಾಮರ್ಥ್ಯದ ಸದ್ಗುಣ- ದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ
--------------
ಜನ್ನ
ಪೋದಿರುಳಿನ ಕಿತ್ತಡಮಾ ಮೂದಲೆಯಾಗಿಂತು ನುಡಿದೊಉುಟೆದುದನಉಣುದಾ ಪಾದರಿ ಬೇಸತ್ತವೊಲಿರೆ ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ
--------------
ಜನ್ನ
ಬೇಡಿದ ಕಾಡೊಳ್‌ ಮಲೆವೆಯಾ ಯ್ತೀಡಾಡುವಮಿದಆ ಪೊೌಯನೆನಗಂ ನಿನಗಂ ಮೂಡುವ ಮುಖುಗುವ ದಂದುಗ- ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
--------------
ಜನ್ನ
ಭೈರವನ ಜವನ ಮಾರಿಯ ಮೂರಿಯವೋಲ್‌ ನಿಂದ ಮಾರಿದತ್ತಂ ಲಲಿತಾ- ಕಾರರ ಧೀರರ ಬಂದ ಕು ಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
--------------
ಜನ್ನ
ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ಬಿಲ ಪೂವಿಂ ದಂ ಪೊಯ್ಯೆ ಮೂರ್ಛೆವೋದಳ್‌ ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಅದಿಂದ
--------------
ಜನ್ನ
-->