ಒಟ್ಟು 23 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ- ದೆರ್ಮೆಯ ಪೋರಿಯನಿಕ್ಕಿದ- ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ
--------------
ಜನ್ನ
ಕಿತ್ತ ಕರವಾಳ್ಗ ಮೆನಗಂ ಮೃತ್ಯುವಿನಂತಿರ್ದ ಮಾರಿಗಂ ಬೆದಅದೆ ನಿಂಂ- ದರ್ಶಿಯನೆ ನುಡಿದರಿವರ ನೆ ಗುಟ್‌ ಕರಂ ಪಿರಿದು ಧೀರರಕಟ ಕುಮಾರರ್‌
--------------
ಜನ್ನ
ಕೆಲಕಾಲಮುಗ್ರತಪಮಂ ಸಲಿಸಿ ಸಮಾಧಿಯೊಳೆ ಮುಡಿಪಿ ಮೂಣನೆಯ ದಿವಂ ನೆಲೆಯಾಗೆ ಮಾರಿದತ್ತಂ ಕಲಿಯಂ ಮೂದಲಿಸಿದಂತೆ ದೇವನೆ ಆದಂ
--------------
ಜನ್ನ
ಧನಮಂ ಕಂಡ ದರಿದ್ರನ ಮನದವೊಲೆಅಗಿದವು ಪರಿಜನಂಗಳ ನೊಸಲಾ ವಿನಯನಿಧಿಗಾ ಕುಮಾರಕ ನನುರಾಗದೆ ಮಾರಿದತ್ತ ವಿಭುಗಿಂತೆಂದಂ
--------------
ಜನ್ನ
ಭೈರವನ ಜವನ ಮಾರಿಯ ಮೂರಿಯವೋಲ್‌ ನಿಂದ ಮಾರಿದತ್ತಂ ಲಲಿತಾ- ಕಾರರ ಧೀರರ ಬಂದ ಕು ಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
--------------
ಜನ್ನ
ಮಾರಿ ಮಾಲಯಾನಿಳಂ ನವ ನೀರಜವನಮೆಂಬ ಕೆಂಡದೊಳ್‌ ದಂಡನಮ- ಸ್ಕಾರದೆ ಬಂಂದಪನಿತ್ತವ- ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್‌..
--------------
ಜನ್ನ
-->