ಒಟ್ಟು 24 ಕಡೆಗಳಲ್ಲಿ , 1 ಕವಿಗಳು , 23 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ- ಜಿನ ಲಡ್ಡುಗೆಯಂ ಮಾಡಿದು- ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ
--------------
ಜನ್ನ
ಕರಮೆಸೆಯೆ ಸಮೆದು ಬಂದುದು ಚರಣಾಯುಧಮದಳಣ ಚಿತ್ರಪರಿಶೋಭೆಗೆ ಬೆಂ ತರನೊಂದಾಶ್ರಯಿಸಿರ್ದುದು ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ
--------------
ಜನ್ನ
ದೊರೆಕೊಳೆ ಸಮಾಧಿಮರಣಂ ಚರಣಾಯುಧಯುಗಳಮಟೆದು ಕುಸುಮಾವಳಿಯೆಂ ಬರಸಿಯ ಬಸಿಖೊಳ್‌ ಬಂದವು ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್‌
--------------
ಜನ್ನ
ಧರಣೀ ಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ
--------------
ಜನ್ನ
ಪರಿವಾರಮಂ ಪ್ರಧಾನರ- ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ- ಧರನಿಂತು ತಪಕೆ ನಡೆಯ- ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್‌
--------------
ಜನ್ನ
ಬಾಳಲರ್ಗುಡಿ ಪಿಕರುತಿ ಬಾ- ಯ್ಯೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ ಪಾಳಂ ಬರೆ ಶೋಧಿಪ ವನ- ಪಾಳನವೊಲ್‌ ಮುಂದೆ ಬಂದುದಂದು ವಸಂಂತಂ
--------------
ಜನ್ನ
ಭೈರವನ ಜವನ ಮಾರಿಯ ಮೂರಿಯವೋಲ್‌ ನಿಂದ ಮಾರಿದತ್ತಂ ಲಲಿತಾ- ಕಾರರ ಧೀರರ ಬಂದ ಕು ಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
--------------
ಜನ್ನ
ಮತ್ತಂ ಧರ್ಮವಿಹಾರ ನಿ- ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳ್ಬು ಸು- ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
--------------
ಜನ್ನ
-->