ಒಟ್ಟು 25 ಕಡೆಗಳಲ್ಲಿ , 1 ಕವಿಗಳು , 25 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೊಡೆ ಮುನಿದಂಬಿಕೆಯಿಂ ತೆಂದಳ್‌ ನಿಜಮಪ್ಪ ಮೋಹದಿಂ ಸಲುಗೆಯಿನೆ ಯ್ತಂದಳ್‌ ನಾಡೆ ನೃಪೇಂದ್ರನ ಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್‌
--------------
ಜನ್ನ
ಎಂಬ ನುಡಿಗೇಳ್ಬು ಮೋಪಳ್‌ VEDA ಕೂಡಿರ್ದ ನಣ್ಣುಗಂಡುಂ ತಮದಿಂ ದಂ ಬೆಂದು ಸತ್ತುದರೆಗೊ- ಯ್ದುಣ್ಣುದಜೆಂ ನೊಂದು ಸತ್ತುದಿಲ್ಲಜಪೋತಂ
--------------
ಜನ್ನ
ಎಂಬುದುಮರಸಂಂ ಮುನಿವರ- ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ- ಯಾಂಬುಜಪದಮಾ ತನ್ನ ಶಿ- ರೋಂಬುಜದಿಂದರ್ಚಿಸಲ್‌ ಪರಿಚ್ಛೇದಿಸಿದಂ
--------------
ಜನ್ನ
ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ- ಜಿನ ಲಡ್ಡುಗೆಯಂ ಮಾಡಿದು- ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
ತನುವಾರ್ಗಮಶುಚಿ ಶುದ್ಧಾ- ತ್ಮನೆ ಶುಚಿ ಕಾಗೆಯವೊಲೇನೊ ಮಿಂಂದವನೇಂ ಶು- ಸಂಸ್ಕಾರಶತೇನಾ- ಪಿನ ಗೂಥಃ ಕುಂಕುಮಾಯತೇ ಎಂದಜೆಯೆಯಾ
--------------
ಜನ್ನ
ತರಿಸಿ ಪರಿಶುದ್ದಿ ಗೆಯ್ದದ- ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ- ಧರ ಚಂದ್ರಮತಿಗಳೊಸೆದು- ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್‌
--------------
ಜನ್ನ
ತಲೆಯಿಂ ಕುಕ್ಕೂಕೂ ಎಂ ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ ಲ್ಲುಲಿಯೆನೆ ಪಿಟ್ಟಿನ ಕೋಟೆಯ ತಲೆಯಂ ಹಿಡಿವಂತಿರಟ್ಟೆ ಪಾಣಿದುದಿನಿಸಂ
--------------
ಜನ್ನ
ಶ್ರೀಜಿನದೀಕ್ಷೆಗೆ ತನುವಂ ಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾ ರಾಜಾ ತಥಾ ಪ್ರಜಾ ಎಂ ಬೋಜೆಯಿನಂದರಸುಗಳ್‌ ಪಲರ್‌ ತಜೆಸಂದರ್‌
--------------
ಜನ್ನ
ಸಳನೆಂಬ ಯಾದವಂ ಹೊಯ್‌ ಸಳನಾದಂ ಶಶಕಪುರದ ವಾಸಂತಿಕೆಯೊಳ್‌ ಮುಳಿದು ಪುಲಿ ಪಾಯ್ವುದುಂ ಹೊಯ್‌ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
--------------
ಜನ್ನ
-->