ಒಟ್ಟು 825 ಕಡೆಗಳಲ್ಲಿ , 1 ಕವಿಗಳು , 291 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿನಯಾದಿತ್ಕನೆ ಹೊಯ್ಸಳ ಜನಪತಿಗಳ ಕೀರ್ತಿಪುಂಡರೀಕಿನಿಗುನ್ನೀ- ಲನಮನೊಡರ್ಚಿದನೆಖೆಯಂ- ಗ ನೃಪಾಲನ ತಂದೆ ಬಿಟ್ಟದೇವಂಗಜ್ಜಂ
--------------
ಜನ್ನ
ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ- ರ್ಪೆಸೆದುದು ಚಾಗಿಯಂತೆ ನೆ೫್‌ೌ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ. ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ- ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್
--------------
ಜನ್ನ
ವೀರತಪಸ್ವಿ ಯಶೌಘಮ- ಹಾರಾಜಂಂ ನೋನ್ತು ಕಟಿದು ಸುರವರವನಿತಾ ಸೇರಕಟಾಕ ನಿರೀಕಣ ಕೈರವಶೀತಾಂಂಶುದೇವನಾದಂ ದಿವದೊಳ್‌
--------------
ಜನ್ನ
ವ್ರತಹಾನಿ ಹಿಂಸೆಯೊಂದೀ ಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂ ಚತುರಂಗಬಲ ಸಮೇತಶಂ ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ
--------------
ಜನ್ನ
ಶೀರ್ಷಾಭರಣಮೆಂಂಬ ಧರೆಗು- ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್‌ ರಾಜಪುರಂ
--------------
ಜನ್ನ
ಶುಚಿರಜರಜಸಿ ಭವೇನ್ಮಾಸ್‌ ಪಚನೇ ಶ್ವಸ್ಥಷ್ಟದೋಷಮೆಂಬುದು ವೇದ ಪ್ರಚುರಮನೆ Sey, ನೃಪನಾ ವಚನಮುಮಂ ನಂಬಿ ನೆಜದ ಪೊಲೆಯರ ಪೋಂತಂ
--------------
ಜನ್ನ
ಶ್ರಾವಕಜನದುಪವಾಸಂ ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ- ಳ್ಲೀವಸ್ತು ಕಥನದಿಂದು- DQ oA ಕವಿಭಾಳಲೋಚನಂ ವಿರಚಿದಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ- ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ- ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂ ಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
--------------
ಜನ್ನ
ಶ್ರೀಜಿನದೀಕ್ಷೆಗೆ ತನುವಂ ಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾ ರಾಜಾ ತಥಾ ಪ್ರಜಾ ಎಂ ಬೋಜೆಯಿನಂದರಸುಗಳ್‌ ಪಲರ್‌ ತಜೆಸಂದರ್‌
--------------
ಜನ್ನ
ಶ್ರೀಮತ್ಕಾಣೂರ್ಗಣ ಚಿಂ. ತಾಮಣಿಗಳ್‌ ರಾಮಚಂದ್ರ ಗಂಡವಿಮುಕ್ತರ್‌ ತಾಮೆ ಗಡ ಗುರುಗಳೆನಿಪ ಮ- ಹಾ ಮಹಿಮೆಗೆ ನೋಂಂತ ಭವ್ಯಚೂಡಾರತ್ನಂ
--------------
ಜನ್ನ
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾ ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮ ತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾ ಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್‌ ತಗುಟ್ಟಂ
--------------
ಜನ್ನ
ಸಂಕಲ್ಪಹಿಂಸೆಯೊಂದಆೊ- ಭವದ ದುಃಖಮುಂಡೆಂ ನೀನ್‌ ನಿಃ ಶಂಕತೆಯಿನಿನಿತು ದೇಹಿಗ- ಳಂ ಕೊಂದಪೆ ನರಕದೊಳ್‌ ನಿವಾರಣೆವಡೆವಯ್‌
--------------
ಜನ್ನ
ಸಜ್ಜನ ಚೂಡಾಮಣಿ ತ- ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ- ಗುಜ್ಜಳಿಕೆವಡೆದ ಪೆರ್ಮೆಯೊ ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
--------------
ಜನ್ನ
ಸಳನೆಂಬ ಯಾದವಂ ಹೊಯ್‌ ಸಳನಾದಂ ಶಶಕಪುರದ ವಾಸಂತಿಕೆಯೊಳ್‌ ಮುಳಿದು ಪುಲಿ ಪಾಯ್ವುದುಂ ಹೊಯ್‌ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
--------------
ಜನ್ನ
-->