ಒಟ್ಟು 831 ಕಡೆಗಳಲ್ಲಿ , 1 ಕವಿಗಳು , 293 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡದೊಡೆ ತಾಯ್ಗೆ ಮರಣಂ ಮಾಡಿದೊಡೆನ್ಕೊಂದು ಗತಿಗೆ ಕೇಡಿಂದೇನಂ ಮಾಡುವೆನೆಂದಾಂದೋಳಮ ನಾಡೆ ಮನಂ ತಮಮನಪ್ಪು ಕಯ್ದ ನಿಳೇಂ
--------------
ಜನ್ನ
ಮಾಡುವನಾತ್ಮಂ ನೆಟ್ಟನೆ ಮಾಡಿತನುಣ್ಟಾತನಾತ್ಮನಘ ಜಲಧಿಯೊಳೋ- ಲಾಡುವೊಡಂ ಗುಣಗಣದೊಳ್‌ ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ
--------------
ಜನ್ನ
ಮಾರಿ ಮಾಲಯಾನಿಳಂ ನವ ನೀರಜವನಮೆಂಬ ಕೆಂಡದೊಳ್‌ ದಂಡನಮ- ಸ್ಕಾರದೆ ಬಂಂದಪನಿತ್ತವ- ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್‌..
--------------
ಜನ್ನ
ಮಾಳಿಗೆಯೊಳಗಣ ಸೊಡರ್ಗುಡಿ ಡಾಳಂಬಡೆದಂತೆ ರಂಗರಕ್ತಿ ಯೊಳಮರ್ದುಂ ಪಾಳಿಕೆವಡೆದು ಬಜಾವಣೆ ಮಾಳಸಿರಿಯೆಂಂಬ ರಾಗಮಂ ಚಾಳಿಸಿದಂ
--------------
ಜನ್ನ
ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
ಮೀನಾದುದೆಯ್ಯಮೃಗಮು- ಜ್ಹೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್‌ ತಾನಲ್ಲಿ ಮೊಸಳೆಯಾದ ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ
--------------
ಜನ್ನ
ಮುಂತಅಣಪೆ ತಾಯ ವಚನದೊ ಳಂತು ಶುಭೇತರ ವಿನಾಶ ಶಬ್ಧ್ದಮಿಳೇಶಂ ಶಾಂತಂಂ ಪಾಪಮೆನುತ್ತುಂ ಶಾಂತಮನು ಪೇಸಿ ಮುಚ್ಚಿಕೊಂಂಡಂ ಕಿವಿಯಂ
--------------
ಜನ್ನ
ಮುಟ್ಟಿದೊಡೆ ಸುಖದ ಸೋಂಕಂ ಪುಟ್ಟಿಸುವಾ ವಾಮೆಯಾದೊಡೆ ಮುನ್ನಂ ಬಟ್ಟಿದುವೆನಿಸುವ ಮೊಲೆ ನಿ ರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ
--------------
ಜನ್ನ
ಮುದುಗರಡಿಯ ಮದುದೊವಲಂ ದದ ಕರಿಯಂ ತಾಳಕಾಯ ಮೋಳಿಗೆಯೊಂದಂಂ ದದ ಮರುಡನಷ್ಟವಂಕಂ ಮೊದಲೊಣಗಿದ ಕೂನಗೊರಡಿನಂದದ ಕೊಂಕಂ.
--------------
ಜನ್ನ
ಮುನಿದಯ್ನೂಹುಂ ಕುನ್ನಿಗ ಳನಿತುಮನೊರ್ಮೊದಲೆ ತೋಜೆ ಕೊಳ್ಳೊಳಿಸೆ ಮಹಾ ಮುನಿ ತಳರದೆ ಮೇರುವೊಲಿರೆ ವನಮೃಗದವೊಲುರ್ಕನಣಿದು ಸುಟೆದುವು ನಾಯ್ಗಳ್‌
--------------
ಜನ್ನ
ಮುನಿಸಮುದಾಯಸಮೇತಶಂ ವಿನೇಯಜನ ವನಜವನದಿವಾಕರನಂತಾ ಮುನಿಪನುಪವಾಸಮಂ ಪ- ರ್ವ ನಿಮಿತ್ತಂ ಕಳೆದು ಬಲುಕ ಬಾಲಕಯುಗಮಂ
--------------
ಜನ್ನ
ಮೇಗಂಂ ಬಗೆವೊಡೆ ವಧೆ ಹಿತ ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಟ್‌ ಈಗಳೊ ಮೇಣ್‌ ಆಗಳೂ ಮೇಣ್‌ ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ
--------------
ಜನ್ನ
ಮೇರು ನೃಪ ಪ್ರಾಸಾದಂ ವಾರಧಿ ನಿಜಪರಿಖೆ ವಜ್ರವೇದಿಕೆ ತತ್‌ಪ್ರಾ- ಕಾರಂ ಜಂಬೂದ್ವೀಪಾ ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ
--------------
ಜನ್ನ
ರತಿವೆರಸು ಮನಸಿಜಂ ಬನ- ದತಿಶಯಮಂ ನೋಡಲೆಂದು ಬರ್ಪಂತೆ ಯಶೋ- ಮತಿ ಕುಸುಮಾವಳಿವೆರಸು- ನ್ನತಪೀತಚ್ಛತ್ರನಂದನಂ ನಡೆತಂದಂ
--------------
ಜನ್ನ
ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ಬಿಲ ಪೂವಿಂ ದಂ ಪೊಯ್ಯೆ ಮೂರ್ಛೆವೋದಳ್‌ ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಅದಿಂದ
--------------
ಜನ್ನ
-->