ಒಟ್ಟು 825 ಕಡೆಗಳಲ್ಲಿ , 1 ಕವಿಗಳು , 291 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿಂತು ಬೆಸಸೆ ಜಾತಿ ಸ್ಮರಂಗಳಾಗಿರ್ದು ಪಕ್ಕಿಗಳ್‌ ಕೇಳ್ಬೆರ್ದೆಯೊಳ್‌ ಪರಮೋತ್ಸವದಿಂ ವ್ರತಮಂ ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂಂ
--------------
ಜನ್ನ
ಗುರುವಿಂದು ಬೆಸಸೆ ಭಿಕ್ಷೆಗೆ ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
--------------
ಜನ್ನ
ಗೋದಾಮೆಗಂಡ ನವಿಲಂ ತಾದುದು ಕಾರ್ಗಂಡ ಹಂಸನವೊಲಾದುದಲರ್‌ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣ್ಮೆಗೆನ್ನಯ ಚಿತ್ತಂ
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ಚರಿಗೆಗೆ ಬೀಯ್ಕೊಡೆ ಗುರುಗಳ ಚರಣಕ್ಕಾ ಯುಗಳಮೆಣಗಿ ಪೊಅಮಟ್ಟಾಗಳ್‌ ತರುಣ ವನಹರಿಣಯುಗಮಂಂಂ ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ
--------------
ಜನ್ನ
ಚಲದ ಬಲದೆಸಕದಿಂ ಸಲೆ ನಿಲೆ ನಾಲ್ಕುಂ ದೆಸೆಯ ಮೂಜುವರೆ ರಾಯರ ಮುಂಂ- ದಲೆಯೊಳಗುಂದಲೆಯೆನೆ ನಿಂ- ದಲೆವುದು ತೇಜಂ ಪ್ರತಾಪ ಚಕ್ರೇಶ್ವರನಾ
--------------
ಜನ್ನ
ಜನಕಂ ಯಶೋಧರಂ ಪಿ- ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ- ಡಿನ ಪೋರಿ ಪೋಂತು ಕುಕ್ಕುಟ- ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
--------------
ಜನ್ನ
ಜವಳಿವೇ*ೆ ಮನುಜರೂಪದಿ- ನವನಿಯೊಳೊಗೆದಂತೆ ಕಾಂತಿ ಮೆ೫ೌದಪುದಿಂದಿಂ- ತಿವರ್ಗಳ ಚೆಲ್ಚಿಕೆ ಕಣ್ಗಳ ತವರಾಜಮನಿಂದು ಕಂಡೆನೀ ಬಾಲಕರಂ
--------------
ಜನ್ನ
ಜಿನಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನಮೆಂಬ ತುಂಬಿಯೆಜಕಮ- ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
ಜೀವದಯೆ ಜೈನಧರ್ಮಂ ಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂ ಭಾವಿತಮೆ ತಪ್ಪಿನುಡಿದಿರ್‌ ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ
--------------
ಜನ್ನ
ತಜೌದೊಡೆ ಕಡೆದೊಡೆ ಸೀಳ್ದೊಡೆ ಪೊಜಮಡುವುದೇ ಕಿಚ್ಚು ಕಾಷ್ಠದಿಂ ಪೊಸೆಯಲೊಡಂ ಪೊಃ೫ಮಡುವುದಂತೆ ಜೀವಂ ಪೆಅತೊಡಲಿಂ ತೋಹುಗುಂ ವಿವೇಕಕ್ರಿಯೆಯಿಂ
--------------
ಜನ್ನ
ತಡವಾದಪ್ಪುದು ಪೌರರ್‌ ಕುಡುವೇಟ್ಟುದು ಹಲವು ಜೀವರಾಶಿಯ ಬಲಿಯಂ ನಡೆಯೆನೆ ಹಸಾದಮಾಗಳೆ ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ
--------------
ಜನ್ನ
ತಡವಾದುದುಂಟು ನಲ್ಲನೆ ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ ತೊಡೆಯೇಉ ಸಿ ಕೇಳಿಕೆಯಾ ದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ
--------------
ಜನ್ನ
ತನಗರಸುವೆರಸು ಪುರಜನ ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾ- ರ್ಚನೆವೆರಸು ಜಾತ್ರ ನೆರೆಯದೊ- ಡನಿತುಮ ನೊರ್ಮೊದಲೆ ವಿಳಯದೊಳ್‌ ನೆರೆಯಿಸುವಳ್‌
--------------
ಜನ್ನ
-->