ಒಟ್ಟು 200 ಕಡೆಗಳಲ್ಲಿ , 1 ಕವಿಗಳು , 146 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೇಗಂಂ ಬಗೆವೊಡೆ ವಧೆ ಹಿತ ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಟ್‌ ಈಗಳೊ ಮೇಣ್‌ ಆಗಳೂ ಮೇಣ್‌ ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ
--------------
ಜನ್ನ
ಮೇರು ನೃಪ ಪ್ರಾಸಾದಂ ವಾರಧಿ ನಿಜಪರಿಖೆ ವಜ್ರವೇದಿಕೆ ತತ್‌ಪ್ರಾ- ಕಾರಂ ಜಂಬೂದ್ವೀಪಾ ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ
--------------
ಜನ್ನ
ವನಿತೆಯ ಕೇಡಂ ಜನಪತಿ ಕನಸಿನ ನೆವದಿಂದೆ ಮಸೆ ತಲ್ಲಣದಿಂ ತಾಯ್‌ ನೆನೆದಳ್‌ ಪೊಲ್ಲಮೆಯಂ ವಂ ಚನೆಯೆಲ್ಲಿಯುಮೊಳು ಮಾಡಲಾಅದು ಕಡೆಯೊಳ್‌
--------------
ಜನ್ನ
ವಿನಯಾದಿತ್ಕನೆ ಹೊಯ್ಸಳ ಜನಪತಿಗಳ ಕೀರ್ತಿಪುಂಡರೀಕಿನಿಗುನ್ನೀ- ಲನಮನೊಡರ್ಚಿದನೆಖೆಯಂ- ಗ ನೃಪಾಲನ ತಂದೆ ಬಿಟ್ಟದೇವಂಗಜ್ಜಂ
--------------
ಜನ್ನ
ವೀರತಪಸ್ವಿ ಯಶೌಘಮ- ಹಾರಾಜಂಂ ನೋನ್ತು ಕಟಿದು ಸುರವರವನಿತಾ ಸೇರಕಟಾಕ ನಿರೀಕಣ ಕೈರವಶೀತಾಂಂಶುದೇವನಾದಂ ದಿವದೊಳ್‌
--------------
ಜನ್ನ
ವ್ರತಹಾನಿ ಹಿಂಸೆಯೊಂದೀ ಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂ ಚತುರಂಗಬಲ ಸಮೇತಶಂ ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
ಶ್ರೀಮತ್ಕಾಣೂರ್ಗಣ ಚಿಂ. ತಾಮಣಿಗಳ್‌ ರಾಮಚಂದ್ರ ಗಂಡವಿಮುಕ್ತರ್‌ ತಾಮೆ ಗಡ ಗುರುಗಳೆನಿಪ ಮ- ಹಾ ಮಹಿಮೆಗೆ ನೋಂಂತ ಭವ್ಯಚೂಡಾರತ್ನಂ
--------------
ಜನ್ನ
ಸಂಕಲ್ಪಹಿಂಸೆಯೊಂದಆೊ- ಭವದ ದುಃಖಮುಂಡೆಂ ನೀನ್‌ ನಿಃ ಶಂಕತೆಯಿನಿನಿತು ದೇಹಿಗ- ಳಂ ಕೊಂದಪೆ ನರಕದೊಳ್‌ ನಿವಾರಣೆವಡೆವಯ್‌
--------------
ಜನ್ನ
ಸಜ್ಜನ ಚೂಡಾಮಣಿ ತ- ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ- ಗುಜ್ಜಳಿಕೆವಡೆದ ಪೆರ್ಮೆಯೊ ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
--------------
ಜನ್ನ
ಸುರತ ಸುಖಪಾರವಶ್ಶಂ ತರೆ ನಿದ್ರಾಭರಮನಿರ್ವರುಂ ಶಿಥಿಲತನೂ ಪರಿರಂಭಣದಚ್ಚಳಿಯದೆ ಪರಿವೇಷ್ಟಿತ ಬಾಹುವಳಯದೊಳ್‌ ಕಣ್ಗಯ್ದರ್‌
--------------
ಜನ್ನ
-->