ಒಟ್ಟು 30 ಕಡೆಗಳಲ್ಲಿ , 1 ಕವಿಗಳು , 29 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡಸಿದ ನಲ್ಲಳ ತಪ್ಪಂ ತಡವಿಕ್ಕಿದೊಡೇಟು ಭವದ ಕೇಡಡಸುವ ಕಿಟ್‌ ನುಡಿಯಂ ನುಡಿದಳ್‌ ತಾಯೊಂ ದಡಸಿದೊಡೇಅಡಸಿತೆಂಬ ನುಡಿ ತಪ್ಪುಗುಮೇ
--------------
ಜನ್ನ
ಅಮೃತಮತಿ ಅಷ್ಟವಂಕಂ- ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂಂ ಕೊಂ ದು ಮುದಿರ್ತು ಕುಷ್ಠಿಕೊಳೆ ಪಂ- ಚಮ ನರಕದೊಳಬ್ಬಳರಸ ಧೂಮಪ್ರಭೆಯೊಳ್‌
--------------
ಜನ್ನ
ಅವಧಾರಿಸಿ ಕೇಲ್ವುದುಮದ ರವಧಿಯಿನಾಸನ್ನಭವ್ಯನೆಂಬುದನಣೆದಿಂ- ತವರಿಂತು ನುಡಿದರಾತ್ಮನ- ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
--------------
ಜನ್ನ
ಆ ನೃಪನ ಸಭೆಯೊಳಖಳಕ- ಳಾ ನಿಷುಣರ ನಟ್ಟನಡುವೆ ಬೊಟ್ಟಿತ್ತಿ ಗೆಲಲ್‌ ತಾನೆ ಚತುರ್ವಿಧ ಪಂಡಿತ ನೇನೆಂಬುದೊ ಸುಕವಿ ಭಾಳಲೋಚನನಳವಂ
--------------
ಜನ್ನ
ಆ ಪುರದ ತೆಂಕವಂಕದೊ- ಳಾಪೊತ್ತಮನೇಕ ಜೀವಹತಿ ತನಗೆ ಸುಖೋ- ದ್ವೀಪನಮೆನಿಸುವ ಪಾಪಕ- ಳಾಪಂಡಿತೆ ಚಂಡಮಾರಿದೇವತೆಯಿರ್ಪಳ್‌
--------------
ಜನ್ನ
ಆ ವಿಕಟಾಂಂಗನೊಳಂತಾ ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್‌ ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ
--------------
ಜನ್ನ
ಆಳುವ ನಿಜವಿಜಯ ತೇಜೋ ಕಳೆದನೊ ನೃಪತಿ ವಸುಂಧರೆ ಬಳದಿಂ ಪರನ್ಯಪರ ಗಂಡಗಾಳಿಕೆಯ ನದೇಂ ಪೊಳಪಂ ತಳೆದೆಯ್ದೆ ರಾಗಮಂ ಬೀಜುವಿನಂ
--------------
ಜನ್ನ
ಆವೆಡೆಯೊಳಿರ್ದನಾತ್ಮಂ ಗಾವುದು ಕುಜುಪೆಂಂದೊಡಂಗಿಯಂಗದೊಳೆಲ್ಲಂ ತೀವಿರ್ಪಂ ಭೂತಚತು- ಷ್ಟಾವಯವದಿನನ್ಯ ನಾತ್ಮನತಿಚೈತನ್ಯಂ
--------------
ಜನ್ನ
ಇತ್ತಲ್‌ ಬಟುಕ್ಕ ಪಂಚಶ- ತೋತ್ತಮ ಯತಿಸಮಿತಿವೆರಸು ಗಮನಪ್ರಾಯ ಶ್ಚಿತ್ರನಿಮಿತ್ತಂ ಬಂದ ಸು ದತ್ತಾಚಾರ್ಯರ್‌ ಪುರೋಪವನಮಂ ಸಾರ್ದರ್‌
--------------
ಜನ್ನ
ಇವು ಮೊತ್ತಮೊದಲಣುವ್ರತ ಮಿವು ಮಸುಳದೆ ನಡೆದೊಡೈಹಿಕಾಮುತ್ರಿಕಮೆಂ- ಬಿವಸೊಳ್‌ ಸಮಸುಖಿಯಪ್ಪಂ ಭವಭವದೊಳ್‌ ದುಃಖಿಯಪ್ಪನಿವು ಮಸುಳ್ಹಾತಂ
--------------
ಜನ್ನ
ಎಂದನುಡಿ ನೆರೆದ ಜೀವಕ- ದಂಬಂಗಳ್ಗ್ಳಭಯವೆಂಬ ಡಂಗುರದವೊಲೊ- ಪ್ಪಂಬಡೆಯೆ ಮಾರಿದತ್ತನ್ಶ- ಪಂ ಬಿಲ್ಲುಂ ಬೆಣಗುಮಾದನುದ್ದೇಗಪರಂ
--------------
ಜನ್ನ
ಎಂದು ಪರಸಿದೊಡೆ ಪೊಯ್ಯದೆ ನಿಂದು ನೃಪಂ ಮನದೊಳೆಂದನೀ ದೇಗುಲಮಂ ಬಂದು ಪುಗಲೊಡನೆ ಜೀವಂ ನಿಂದಖಿಯದು ಮುನ್ನಮಿನ್ನರಂ ಕಂಡಖಿಯೆಂ
--------------
ಜನ್ನ
ಎಂದು ಮನಸಂದು ಜಿನಮತ ನಂದನದೊಳ್‌ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸ- ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
--------------
ಜನ್ನ
ಎನೆ ಮುನಿವಚನದೊಳಂ ನಂ- ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ- ಳ್ಮನೆ ತಿಳಿದು ಭಾಷು ಸಂಕ- ಲನ ವಧೆಗಿನಿತಾಯ್ತು ದಿಟದಿನೇನೇನಾಗರ್‌
--------------
ಜನ್ನ
ಒಂದು ಮೃಗಂ ಬೀಟದು ನೋ- ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ- ದೆಂದೊಡೆ ಪರದಂ ಪಾಪಂ ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
--------------
ಜನ್ನ
-->