ಒಟ್ಟು 55 ಕಡೆಗಳಲ್ಲಿ , 1 ಕವಿಗಳು , 47 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತೆಸೆಯೆ ಪಾಡುತಿರೆ ತ ದ್ಬಂತಿಪನತಿನೂತ್ನಗೀತ ಪಾತನ ವಿಕಲ ಸ್ವಾಂತೆಗೆ ನೋಡುವ ಕೊಡುವ ಚಿಂತೆ ಕಡಲ್ಪರಿದುದಂದು ಬೆಳಗಷ್ಟಿನೆಗಂ
--------------
ಜನ್ನ
ಅರಸಾದಂ ಸಂವರಣೆಗೆ ಪರರಾಷ್ಟಂ ಗಂಗವಾಡಿ ತೊಂಬತ್ತಜು ಸಾ- ಸಿರಮಂ ಬ್ರಹ್ಮಣದತ್ತಿಗೆ ವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ
--------------
ಜನ್ನ
ಅವರ ಗುಣಮವರ ಸಂಯಮ- ಮವರ ತಪಶ್ಚರಣಮೆಂಬುದವರಿವರಳವ ಲ್ಲವರ ಪೆಸರ್ಗೊಂಡ ನಾಲಗೆ ಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ
--------------
ಜನ್ನ
ಆ ಚಂಡಮಾರಿ ಲೋಚನ ಗೋ ಚರತನುವಾಗಿ ಕುವರನಂ ಬಂದಿಸಿ ನೀ ನಾಚಾರ್ಯನೆಯೆಂದಿಂತಿರೆ ಸೂಚಿಸಿದಳ್‌ ನೆರೆದ ಜಾತ್ರೆ ನೆಉ್‌ ಕೇಳ್ವಿನೆಗಂ
--------------
ಜನ್ನ
ಆ ವಿಂಧ್ಯನಗರದೊಳಾ ನಾಯ್‌ ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌ ಪಾವಂ ಪಗೆಮಿಗೆ ತಿಂದುದು ಬಲ್‌ ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
--------------
ಜನ್ನ
ಆ ವಿಕಟಾಂಂಗನೊಳಂತಾ ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್‌ ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ
--------------
ಜನ್ನ
ಆಗಳ್‌ ತಂದೆಯ ತಪದು- ದ್ಯೋಗಂ ತಡವಾಗದಂತೊಡಂಬಟ್ಟು ಮಹೀ ಭೋಗಕ್ಕನುಜ ಯಶೋಧರ ನಾಗಿರೆ ಬಟೆಕಭಯರುಚಿಯುಮನುಜೆಯ ಸಹಿತಂ
--------------
ಜನ್ನ
ಇಂತೆಂಂಬುದುಮಾ ಕುವರನ ದಂತಪ್ರಭೆಯೆಂಬ ಶೀತಕರನುದಯದಘ ಧ್ವಾಂತೌಘಮಧುಪಮಾಲಿಕೆ ಯಂ ತೊಲಗಿಸಿ ಮುಗಿದುದವನ ಕರಸರಸಿರುಹಂ
--------------
ಜನ್ನ
ಇತಿಹಾಸಮೆಂಬ ವಿಮಳಾ- ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ- ನ್ವಿತಮಾಗಿರೆ ಕಥೇ ಬುಧಸಂ- ತತಿಗಕ್ಷಯ ಸುಖಮನೀವುದೊಂಂದಚ್ಚರಿಯೇ
--------------
ಜನ್ನ
ಎಂದೊಡೆ ದೂದವಿಗವಳಿಂ ತೆಂದಳ್‌ ಗರಗರಿಕೆ ಕೊರಲೊಳೀಕ್ಷಣದೊಳ್‌ ವಾ ರ್ಬಿಂದು ಮಿಡುಕೆರ್ದೆಯೊಳೊದವೆ ಪು PODS BF ನಟ್ಟು ನಿಂದ ವನಹರಿಣಿಯವೊಲ್‌
--------------
ಜನ್ನ
ಎನುತುಂ ಬಂದು ವಿಷಣ್ಣಾ ನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಚ್ವಾ ಸ ನಿತಪ್ತಾಧರರುಚಿಯಂ ಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್‌
--------------
ಜನ್ನ
ಒಲವಾದೊಡೆ ರೂಪಿನ ಕೋ ಟಲೆಯೇವುದೊ ಕಾರ್ಯಮಾಗೆ ಕಾರಣದಿಂಂದಂಂ ಫಲಮೇನಿಂದೆನಗಾತನೆ ಕುಲದೈವಂ ಕಾಮದೇವನಿಂದ್ರಂ ಚಂದ್ರಂ
--------------
ಜನ್ನ
ಕಂ॥ ಪುರುದೇವಾದಿಗಳೊಲಿಸಿದ ಪರಮಶ್ರೀವಧುವನೊಲಿಸಿಯುಂ ಪರವನಿತಾ ನಿರಪೇಕ್ಟಕನೆನಿಸಿದ ದೇ- ವರದೇವಂ ಕುಡುಗೆ ಸುವ್ರತಂ ಸುವ್ರತಮಂ
--------------
ಜನ್ನ
ಕಡೆಗಣ್ಗಳ್‌ ಕೇದಗೆಯಂ ಪಡೆದುವು ಮಲ್ಲಿಗೆಗೆ ಸೆಳ್ಳುಗುರ್‌ ಸಂಂಪಗೆಯಂ ಪಡೆದುವು ಪಾದರಿಗೆನೆ ಸಂ- ಗಡರಿಂಂದಲರ್ಗೊಯ್ವ ವಾರವನಿತೆಯರೆಸೆದರ್‌
--------------
ಜನ್ನ
ಕರಹಟದೊಳ್‌ ಬೇಂಟೆಯ ಕು- ಕ್ಯುರಿಯಾದಳ್‌ ಸತ್ತು ಚಂದ್ರಮತಿಯುಂ ಬಟೆಕಾ- ಯೆರಡುಮುಪಾಯನ ಘಟನೆಯಿ- ನರಮನೆಯಂ ಸಾರ್ದುವಾ ಯಶೋಧರಸುತನಾ
--------------
ಜನ್ನ
-->