ಒಟ್ಟು 34 ಕಡೆಗಳಲ್ಲಿ , 1 ಕವಿಗಳು , 30 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಈ ನಗರಿಯಪ್ಪುದೆಮ್ಮು-ಜ್ಹೇನಿ ಇದಾನಿರ್ಪ ನೆಲೆಯ ದವಳಾರಮಿದುಂತಾನಮೃತಮತಿಯ ಮಾಡಂಮಾನಿನಿ ನಂಜಿಟ್ಟಳೆನಗೆ ಮುಡಿಪಿದೆನಿದಖೊಳ್
ಎಂದಾಕೆಗೆ ಲಂಚಮನಿತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್ಸಂದಿಸಿದೊಡಮೃತಮತಿ ರಾತ್ರಿಂ ದಿವಮಾತನೊಳೆ ಸಲಿಸಿದಳ್ ತೆಜಪುಗಳಂ
ಒರ್ಮೆ ಯಶೋಮತಿ ಮೃಗಯಾನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ-ದೆರ್ಮೆಯ ಪೋರಿಯನಿಕ್ಕಿದ-ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ
ಕರಹಟದೊಳ್ ಬೇಂಟೆಯ ಕು-ಕ್ಯುರಿಯಾದಳ್ ಸತ್ತು ಚಂದ್ರಮತಿಯುಂ ಬಟೆಕಾ-ಯೆರಡುಮುಪಾಯನ ಘಟನೆಯಿ-ನರಮನೆಯಂ ಸಾರ್ದುವಾ ಯಶೋಧರಸುತನಾ
ಕ್ಷಿತಿಯೋಳ್ ಸಂಸ್ಕೃತದಿಂ ಪ್ರಾ-ಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂಕೃತಿಮಾಡಿದರವರ್ಗಳ ಸನ್ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್
ತರಿಸಿ ಪರಿಶುದ್ದಿ ಗೆಯ್ದದ-ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ-ಧರ ಚಂದ್ರಮತಿಗಳೊಸೆದು-ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್
ದೊರೆವಡೆದ ಯಶೌಘನ ಭೂವರತಿಳಕನ ಕಣ್ಗಳಂಗರಕ್ಕರ್ ಮನಮಾಭರಣಂ ರಾಜ್ಯಶ್ರೀ ಸಹಚರಿಯನೆ ಸಂದತ್ತು ಚಂದ್ರಮತಿಗರಸಿತನಂ
ನವಿಲಮೃತಮತಿಯ ಸೆಜ್ಜೆಯದವಳಾರದೊಳಾಡುತ್ತಿರ್ದು ಬದಗನುಮಂ ತ-ನ್ನವಳೊಡಗೂಡಿರೆ ನಿಟ್ಟಿಸಿಭವರೋಷದಿನಿಟೆದುದಷ್ಟವಂಕನ ಕಣ್ಣಂ
ನಿನಗಂ ಕುಸುಮಾಳಿಗಂಜಯಿಸಿದಮಳೆಂಬುವಭಯರುಚಿಮತಿಗಳ್ ಮು-ನ್ನಿನ ಜನ್ಮಮನಿತುಮಂ ನೆ-ಟ್ಟನೆ ಬಲ್ಲರ್ ಕೇಳ್ದುನಂಬು ನೀನ್ ಧರಣಿಪತೀ
ನಿರವಿಸಿದ ಚಂದ್ರಮತಿಯೆಂ-ಬರಸಿಯೆ ನಾಯುರಗಿ ಮೊಸಳೆ ಆಡು ಉಲಾಯಂಚರಣಾಯುಧವಧುವಾದಳ್ಗುರುವಚನದಿನೀಗಳಭಯಮತಿಯಾಗಿರ್ದಳ್
ನೋಡುವ ಮಾತಾಡುವ ಬಾಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂಪಾಡಟಲಿಯುತ್ತಿರೆ ನೋಡಲ್ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್
ಪರಿವಾರಮಂ ಪ್ರಧಾನರ-ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ-ಧರನಿಂತು ತಪಕೆ ನಡೆಯ-ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್
ಬೇಂಟೆಗೆ ನಡೆಯೆ ಯಶೋಮತಿಗೆಂಟಖೊಳಾರಣ್ಯವಾಸಿಗಳ್ ನಿಲೆ ಕಂಡಾ-ಬೇಂಟೆ ಪರಿಯದೊಡೆ ಬಿನದದಕಂಟಕನೀ ಸವಣನೆನುತೆ ಬರುತಂಂ ಮುನಿದಂ
ಮಾಡಿದ ಕೋಚೆಯನಜೆದ-ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್ಗೂಡಿನ ಕೋಣಚೆಗಳಾದರ್ನೋಡಯ್ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್
ರತಿವೆರಸು ಮನಸಿಜಂ ಬನ-ದತಿಶಯಮಂ ನೋಡಲೆಂದು ಬರ್ಪಂತೆ ಯಶೋ-ಮತಿ ಕುಸುಮಾವಳಿವೆರಸು-ನ್ನತಪೀತಚ್ಛತ್ರನಂದನಂ ನಡೆತಂದಂ